ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಪ್ರಮದೆಯರ ಯಕ್ಷ ಹೆಜ್ಜೆ

ಲೇಖಕರು :
ಗಣೇಶ ಅಮೀನಗಡ
ಮ೦ಗಳವಾರ, ಒಕ್ಟೋಬರ್ 8 , 2013
ತಂದೆಯ ಯಕ್ಷಗಾನ ನೋಡಿ ಪುತ್ರಿಯರೂ ಯಕ್ಷಗಾನ ಕಲಾವಿದರಾದ ಯಶಸ್ವಿಗಾಥೆ ಇದು.ಏಕವ್ಯಕ್ತಿ ಯಕ್ಷಗಾನದಿಂದ ಪ್ರಸಿದ್ಧರಾಗಿರುವ ಮಂಟಪ ಪ್ರಭಾಕರ ಉಪಾಧ್ಯಾಯ ನಿಮಗೆ ಗೊತ್ತು. ಅವರ ಇಬ್ಬರು ಪುತ್ರಿಯರೂ ಯಕ್ಷಗಾನ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ದಂತ ವೈದ್ಯೆಯಾಗಲು ಎಂಡಿಎಸ್ ಓದುತ್ತಿರುವ ಹಿರಿಯ ಪುತ್ರಿ ಮಾಧುರಿ ಹಾಗೂ ಎಂ.ಟೆಕ್ ಓದಿ ಬೆಂಗಳೂರಿನಲ್ಲಿ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಮದಾ ಒಟ್ಟಿಗೇ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಜೊತೆಗೆ ಪ್ರಭಾಕರ ಅವರ ಯಕ್ಷಗಾನ ಇರುವ ಕಡೆಯಲ್ಲೂ ಪ್ರದರ್ಶನ ಕೊಡುತ್ತಾರೆ.

ಮ೦ಟಪರವರು ತಮ್ಮ ಮಕ್ಕಳಾದ ಕುಮಾರಿ ಡಾ.ಮಾಧುರಿ ಮತ್ತು ಕುಮಾರಿ ಪ್ರಮದಳೊ೦ದಿಗೆ.
ಅವರ ಯಕ್ಷಗಾನ ಡಿ.ವಿ.ಡಿಯೂ ಆಗಿದೆ. ಉಡುಪಿ ಯಕ್ಷಗಾನ ಶಿಕ್ಷಣ ಟ್ರಸ್ಟ್ ಹೊರತಂದಿರುವ ಡಿವಿಡಿಯಲ್ಲಿ ಚಪ್ಪರದಮನೆ ಶ್ರೀಧರ ಹೆಗಡೆ ಅವರ ``ಮಂಥರೆ`` ಪ್ರಸಂಗದೊಟ್ಟಿಗೆ ಪೂರ್ವರಂಗದಲ್ಲಿ ಮಾಧುರಿ ಹಾಗೂ ಪ್ರಮದಾ ಅಭಿನಯಿಸಿದ ಚಿತ್ರಾಂಗದ ಪ್ರಸಂಗವಿದೆ. ಅರ್ಜುನನಾಗಿ ಮಾಧುರಿ, ಚಿತ್ರಾಂಗದೆಯಾಗಿ ಪ್ರಮದಾ ಗಮನ ಸೆಳೆಯುತ್ತಾರೆ.

`ಎಸ್‌ಎಸ್‌ಎಲ್‌ಸಿ ಓದುವಾಗ ಅಪ್ಪ ಹೇಳುತ್ತಿದ್ದ; ಓದುವುದೇ ಮುಖ್ಯವಾದರೆ ಬೇಗ ಬೋರಾಗುತ್ತದೆ. ಓದಿನೊಂದಿಗೆ ಏನಾದರೂ ಹವ್ಯಾಸ ಬೆಳೆಸಿಕೊಳ್ಳೆಂದು. ಹೀಗಾಗಿ ಐದಾರು ವರ್ಷ ಕರ್ನಾಟಕಿ ಸಂಗೀತ ಕಲಿತೆ. ಆಮೇಲೆ ಮೊದಲಿನಿಂದಲೂ ಆಸಕ್ತಿಯಿದ್ದ ನೃತ್ಯ ಕಲಿಕೆಯನ್ನೇ ಮುಂದುವರಿಸಿದೆ. ಹಾಗಂತ ಅಪ್ಪ ಯಕ್ಷಗಾನ ಕುರಿತು ಏನೂ ಹೇಳಿಕೊಟ್ಟಿಲ್ಲ. ಅವರ ಪ್ರದರ್ಶನ ನೋಡಿ ಕಲಿತೆವು.

ಕೃಷ್ಣಮೂರ್ತಿ ತುಂಗಾ ಎರಡು ವರ್ಷ ಯಕ್ಷಗಾನ ಕಲಿಸಿದರು~ ಎನ್ನುವ ಮಾಧುರಿಗೆ ಯಕ್ಷಗಾನ ಪ್ರದರ್ಶನದಿಂದ ಖುಷಿಯಾಗಿದೆ. ಅದಕ್ಕಿಂತ `ಓದುವ ಒತ್ತಡ ಹಾಗೂ ಕೆಲಸದ ಒತ್ತಡ ನಿಭಾಯಿಸಲು ಸುಲಭವಾಗಿದೆ. ಅಪ್ಪ ದಾರಿ ತೋರಿಸಿದ್ದಾರೆ. ನಾವು ಮುನ್ನಡೆಯಬೇಕಷ್ಟೇ~ ಎನ್ನುವ ಮಾಧುರಿ ಮಾತನ್ನು ಬೆಂಬಲಿಸುವ ಪ್ರಮದಾ, ಕಥಕ್ ನೃತ್ಯಗಾರ್ತಿ ಬೆಂಗಳೂರಿನ ನಿರುಪಮಾ ರಾಜೇಂದ್ರ ಅವರ ಬಳಿ ಕಥಕ್ ಕಲಿಯುತ್ತಿದ್ದಾರೆ.

ಜೊತೆಗೆ ಆರು ವರ್ಷಗಳಿಂದ ನಿರುಪಮಾ ಅವರ ಬ್ಯಾಲೆಗಳಲ್ಲಿ ನರ್ತಿಸುತ್ತಿದ್ದಾರೆ. `ಕಥಕ್ ಕಲಿತಿದ್ದರಿಂದ ಯಕ್ಷಗಾನ ಸುಲಭವಾಗಿದೆ. ನಿರುಪಮಾ ಕಲಿಸಿದ ಕೋರಿಯೋಗ್ರಫಿ ಅನುಕೂಲವಾಗಿದೆ. ನೃತ್ಯ ಕಲಿತ ಪರಿಣಾಮ ಯಕ್ಷಗಾನದಲ್ಲಿ ಆಂಗಿಕ ಅಭಿನಯವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ~ ಎಂದು ಖುಷಿಯಾಗಿ ಹೇಳುತ್ತಾರೆ.

ಪ್ರಮದಾಗೆ ಯಕ್ಷಗಾನವೊಂದು ಪ್ಯಾಶನ್. ಆಶು ಸಂಭಾಷಣೆ ಹಾಗೂ ಆಶು ಅಭಿನಯವೇ ಪ್ರಧಾನವಾದ ಯಕ್ಷಗಾನದಲ್ಲಿ ಪ್ರತಿಭಾ ಪ್ರದರ್ಶನವೇ ಮುಖ್ಯ. ಸದ್ಯಕ್ಕೆ ಅವರು ಯಕ್ಷಗಾನ ಪೂರ್ವರಂಗದ ಯಕ್ಷ ದರ್ಪಣದಲ್ಲಿ ಸ್ತ್ರೀವೇಷ, ಚಂದಭಾಮಾ, ರಂಗನ್ಯಾತಕೋ ಬಾರನೇ, ಗೋಪಿಕಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಇದರೊಂದಿಗೆ ರುಕ್ಮಿಣಿ ಹಾಗೂ ನಳ-ದಮಯಂತಿ ಪ್ರಸಂಗಗಳ ತಾಲೀಮಿನಲ್ಲಿದ್ದಾರೆ.

ವಿದ್ಯಾರ್ಥಿನಿಯರಿರುವಾಗ ಯಕ್ಷಗಾನದ ಹೆಜ್ಜೆ ಹಾಕುವವರು ಹೆಚ್ಚು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವವರು ಕಡಿಮೆ. ಮಾಧುರಿ ಹಾಗೂ ಪ್ರಮದಾ ಇದಕ್ಕೆ ವ್ಯತಿರಿಕ್ತ.



ಕೃಪೆ : http://www.prajavani.net

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ